ಬಳ್ಳಾರಿ: ವಿಧಾನಸಭೆ ಚುನಾವಣೆಗೆ ಮೊಳಕಾಲ್ಮೂರ್ ಕ್ಷೇತ್ರದಲ್ಲಿ ಇಂದು ಉಮೇದುವಾರಿಕೆ ಸಲ್ಲಿಸಲಿರುವ ಬಿಜೆಪಿ ನಾಯಕ ಬಿ. ಶ್ರೀರಾಮುಲು ಬೆಳಿಗ್ಗಿನಿಂದಲೇ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿದ್ದಾರೆ.ತಮ್ಮ ಮನೆಯಲ್ಲಿ ಬೆಳಿಗ್ಗೆ 4 ಗಂಟೆಯಿಂದ ಐವರು ಪುರೋಹಿತರ ನೆರವಿನೊಂದಿಗೆ ಪೂಜೆ ಸಲ್ಲಿಸಿದ ಶ್ರೀರಾಮುಲು ಬಳಿಕ ಗೋಪೂಜೆ, ಲಿಂಗ ಪೂಜೆ, ಎಳನೀರಿನ ಅಭಿಷೇಕ ಕೈಗೊಂಡರು.ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಸ್ಪರ್ಧೆಗೆ ಎನ್. ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧವಿದೆ. ಹೀಗಾಗಿ ಗೆದ್ದು ಬರಲು ಭಕ್ತಿಯಿಂದ ಪೂಜೆಯಲ್ಲಿ ತೊಡಗಿರುವ ಶ್ರೀರಾಮುಲು ಬಳಿಕ ಬೆಂಬಲಿಗರೊಂದಿಗೆ ತೆರಳಿ