ಬೆಂಗಳೂರು: ದೇವರಾಣೆ ಹೇಳ್ತಿದ್ದೀನಿ.. ನಾವು ಆಪರೇಷನ್ ಕಮಲ ಮಾಡ್ತಿಲ್ಲ. ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ.. ಹೀಗಂತ ಶಾಸಕ ಬಿ ಶ್ರೀರಾಮುಲು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ. ನಾವು ಆಪರೇಷನ್ ಕಮಲ ಮಾಡ್ತಿಲ್ಲ. ಬೇರೆಯವರಲ್ಲಿ ಭಯ ಹುಟ್ಟಿಸಲು ಬಿಜೆಪಿಯವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ತಾಕತ್ತಿದ್ದರೆ ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ಹಿಡಿತದಲ್ಲಿಟ್ಟುಕೊಳ್ಳಲಿ ಎಂದಿದ್ದಾರೆ.ಇಷ್ಟು ದಿನ ನಮ್ಮ ಮೇಲೆ ಆಪರೇಷನ್ ಕಮಲದ ಆರೋಪ