ಸಿಎಂರನ್ನು ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದ ಘಟನೆ ನಡೆದಿದೆ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಡುವೆ ಕೊರೊನಾ ವೈರಸ್ ಹರಡೋದನ್ನ ಒಂದಷ್ಟು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿ ಬೆಂಗಳೂರು ನಗರ ಆದರ್ಶ ನಗರ ಆಗುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಶ್ರಮ ಹೆಚ್ಚು ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ರಾಜ್ಯ ಸರ್ಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ನಮ್ಮ ಈ ಅಲ್ಪ ಸಾಧನೆಗೆ ಕಾರಣವೆಂದ ಸಚಿವ ಶ್ರೀರಾಮುಲು, ಕೇಂದ್ರ ಸರ್ಕಾರ