ಬೆಳಗಾವಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಮಮಂದಿರ ಭಾರತದಲ್ಲಿ ಅಲ್ಲದೇ ಎಲ್ಲಿ ನಿರ್ಮಿಸಲು ಸಾಧ್ಯ. ಮಂದಿರ ನಿರ್ಮಾಣಕ್ಕೆ ವಿರೋಧಿಸುವವರು ಭಾರತೀಯರೇ ಅಲ್ಲ. ರಾಮಜನ್ಮ ಸ್ಥಳ ಅಯೋಧ್ಯೆ ಅಂತ ಇತಿಹಾಸ ಹೇಳುತ್ತದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಬಾಬರ್ ಹುಟ್ಟಿಲ್ಲ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕೆಂದು ಜಬರ್ದಸ್ತ್ ಯಾಕೆ?