ಯಾರೊಬ್ಬರ ಭಯವೂ ಇಲ್ಲದಂತೆ ಬೇಬಿ ಬೆಟ್ಟದಲ್ಲಿ ನಿತ್ಯವೂ ನಡೆಯುತ್ತಿದೆ ಆ ಕೆಲಸ. ಮಂಡ್ಯದ ಪಾಂಡವಪುರದ ಬೇಬಿಬೆಟ್ಟದ ಸುತ್ತಲೂ ಅಕ್ರಮ ಗಣಿಗಾರಿಕೆ ನಿಲ್ಲುತ್ತಿಲ್ಲ. ಯಾವುದೇ ಅಧಿಕಾರಿಗಳಿಗೂ ಕಿಮ್ಮತ್ತು ಕೊಡದೆ ದಿನನಿತ್ಯ ಗಣಿಗಾರಿಕೆ ನಡೆಸುತ್ತಿದ್ದಾರೆ.ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸ್ವಲ್ಪ ದೂರದಲ್ಲೇ ಇರುವ ಕೆ ಆರ್ ಎಸ್ ಆಣೆಕಟ್ಟೆಗೂ ಅಪಾಯ ಬಂದರೂ ಸಹ ಗಣಿಗಾರಿಕೆ ನಿಲ್ಲಿಸಲು ಮಾಲೀಕರು ಮುಂದಾಗುತ್ತಿಲ್ಲ. ಬೇಬಿ ಬೆಟ್ಟದ ಸದಾಶಿವ ಸ್ವಾಮೀಜಿಗಳ ಗದ್ದುಗೆ ಒಂದು ಕೋಟಿ ವೆಚ್ಚದಲ್ಲಿ