ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಕಾದಿದೆಯಂತೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ. ಹಾಸನಾಂಬೆ ದೇವಾಲಯದಲ್ಲಿ ಮಾತನಾಡಿದ ನರೇಂದ್ರ ಬಾಬು ಶರ್ಮಾ, ಪ್ರಧಾನಿ ಮೋದಿಯವರದ್ದು ವೃಶ್ಚಿಕ ರಾಶಿ. ಶನಿ ದೋಷವಿದೆ. ಶನಿ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವ ಸೆಲೆಬ್ರಿಟಿ ಅಥವಾ ರಾಜಕಾರಣಿಗೆ ಗಂಡಾಂತರ ಕಾದಿದೆ ಎಂದು