ಎಣ್ಣೆ ಪ್ರಿಯರಿಗೆ ಬ್ಯಾಡ್ ನ್ಯೂಸ್. ಕೊರೊನಾ ವೈರಸ್ ಎಫೆಕ್ಟ್ ಇದೀಗ ಮತ್ತೊಮ್ಮೆ ಕುಡುಕರ ಮೇಲಾಗಲಿದೆ. ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜುಲೈ 14 ರಿಂದ ಜುಲೈ 20 ರವರೆಗೆ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಈ ನಡುವೆ ಕಲಬುರಗಿ ನಗರ ಹಾಗೂ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಾರ್ ಗಳು, ಮದ್ಯಮಾರಾಟ ಬಂದ್ ಇರಲಿವೆ.ಎಣ್ಣೆ ಬೇಕು ಎಂದರೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಬಿಟ್ಟು ಹೊರಹೋಗಬೇಕು.