ಕಟ್ಟಡಕ್ಕೆ ವಿದ್ಯುತ್ ಮೀಟರ್ ಅಳವಡಿಸಲು 50 ಸಾವಿರ ರೂ. ಲಂಚಕ್ಕೆೆ ಬೇಡಿಕೆಯಿಟ್ಟ ಬೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬಸವೇಶ್ವರನಗರ ಉಪ ವಿಭಾಗದ ಬೆಸ್ಕಾಂ ಸಹಾಯಕ ಎಂಜಿನಿಯರ್ ಆನಂದ್ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದು,ಮಂಜೇಶ್ ಎಂಬುವವರು ಶಾಶ್ವತ ವಿದ್ಯುತ್ ಮೀಟರ್ ಅಳವಡಿಕೆಗಾಗಿ ಬಸವೇಶ್ವರನಗರದಲ್ಲಿರುವ ಬೆಸ್ಕಂ ಉಪ ವಿಭಾಗಕ್ಕೆೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲ ತಿಂಗಳುಗಳಿಂದ ಬೆಸ್ಕಾಂನಿಂದ ಯಾವುದೇ ಪ್ರತಿಕ್ರೀಯೆ ಬಂದಿರಲಿಲ್ಲ. ಹೀಗಾಗಿ ಮಂಜೇಶ್ ಬೆಸ್ಕಾಂ ಎ.ಇ. ಆನಂದ್ ಅವರನ್ನು