ಡಿಕೆ ಶಿವಕುಮಾರ್ ಗೆ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ನವದೆಹಲಿ| Jagadeesh| Last Modified ಗುರುವಾರ, 19 ಸೆಪ್ಟಂಬರ್ 2019 (18:03 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆಯ ದಿನ ಮುಂದಕ್ಕೆ ಹೋಗಿರೋದು ಡಿಕೆಶಿಗೆ ಹಿನ್ನಡೆಯಾದಂತಿದ್ದು, ಸಧ್ಯಕ್ಕೆ ಜೈಲೇ ಗತಿ ಎಂಬಂತಾಗಿದೆ.

ಡಿಕೆಶಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ. ಅಕ್ರಮ ಹಣ ಹರಿವು ಆಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಅಂತ ಇಡಿ ಪರವಾಗಿರೋ ನ್ಯಾಯವಾದಿ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ರು.

ತನಿಖೆಗೆ ಇನ್ನೂ ಆಗಬೇಕಿರುವುದರಿಂದ ಜಾಮೀನು ಮಂಜೂರು ಮಾಡಬಾರದು ಅಂತ ಇಡಿ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ರು.

ಡಿ.ಕೆ.ಶಿ ಪರ ವಕೀಲರು ಕೆಲ ಸಮಯ ಪ್ರತಿವಾದ ನಡೆಸಿದ್ರು. ಇದೇ ಸಂದರ್ಭದಲ್ಲಿ ಶನಿವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಅಂತ ನ್ಯಾಯಾಧೀಶರು ತಿಳಿಸಿದ್ರು.

ಹೀಗಾಗಿ ಇನ್ನೆರಡು ದಿನ ಡಿಕೆಶಿಗೆ ತಿಹಾರ್ ಜೈಲೇ ಗತಿ ಎನ್ನುವಂತಾಗಿದೆ.

ಇದರಲ್ಲಿ ಇನ್ನಷ್ಟು ಓದಿ :