ಜಾತ್ರೆ ಅಂದ್ರೆ ಪಲ್ಲಕ್ಕಿ ಉತ್ಸವ, ತೇರು, ತುಲಾಭಾರ ನಡೆಯುವುದು ಸಾಮಾನ್ಯ. ಇನ್ನು ಕೆಲವು ಕಡೆ ಕುರಿ, ಕೋಳಿಯನ್ನು ಕಡೆಯುತ್ತಾರೆ. ಆದರೆ ಇಲ್ಲೊಂದು ಕಡೆ ಬೃಹತ್ ಗಾತ್ರದ ಬಲೂನನ್ನು ಆಕಾಸದೆತ್ತರಕ್ಕೆ ಹಾರಿಸುವ ಮೂಲಕ ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿಯಲ್ಲಿ ಶ್ರೀ ರಾಮನಾಥ ದೇವರ ಜಾತ್ರೆ ಆಕಾಶಕ್ಕೆ ಬಲೂನ್ ಹಾರಿಸುವ ಮೂಲಕ ವಿಶಿಷ್ಟ ವಾಗಿ ನಡೆಯುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಆರಂಭವಾಗುವ ಈ ಜಾತ್ರೆಗೆ ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ.