ರಸ್ತೆ ಬದಿಯಲ್ಲಿ ಬಲೂನ್ ಮಾರುವ ಬಾಲಕನೊಬ್ಬ ಮುದ್ದಾದ ಶ್ವಾನದೊಂದಿಗೆ ಆಟ ಆಡುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಶ್ವಾನ ಕಾರಿನೊಳಗೆ ಇದ್ದರೆ ಬಾಲಕ ರಸ್ತೆ ಬದಿಯಲ್ಲಿ ಬಲೂನ್ ಹಿಡಿದು ನಿಂತಿದ್ದ. ಈ ಬಾಲಕನೊಂದಿಗೆ ಇನ್ನೊಬ್ಬ ಪುಟಾಣಿ ಕೂಡಾ ಇದ್ದ. ಇಬ್ಬರೂ ಈ ಶ್ವಾನವನ್ನು ಮುದ್ದಿಸುತ್ತಿದ್ದ ಪರಿಯೇ ಸುಂದರ. ಶ್ವಾನ ಕೂಡಾ ಈ ಮಕ್ಕಳೊಂದಿಗೆ ಅಷ್ಟೇ ಆಪ್ತವಾಗಿ ಇತ್ತು. ಈ ಆಟ, ಈ ಪ್ರೀತಿಯನ್ನು ನೋಡುವಾಗಲೇ ಖುಷಿಯಾಗುತ್ತದೆ. ಒಂದು ಕ್ಷಣ