ಬೆಂಗಳೂರು : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನೇ ಮುಂದಿಟ್ಟುಕೊಂಡು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ಸಿನ ʼಮಡಿಕೇರಿ ಚಲೋʼಗೆ ಕೊಡಗು ಜಿಲ್ಲಾಡಳಿತ ಬ್ರೇಕ್ ಹಾಕಿದೆ.ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಡಳಿತ ಬುಧವಾರದಿಂದ ಶನಿವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ಹೀಗಾಗಿ ಶುಕ್ರವಾರ ಮಡಿಕೇರಿ ಪ್ರವೇಶ ಮಾಡುವ ಪ್ರಯತ್ನ ಮಾಡಿ ಕೈ ನಾಯಕರು ಅರೆಸ್ಟ್ ಆಗುತ್ತಾರಾ? ಅಥವಾ ನಿಷೇಧಾಜ್ಞೆ ಕಾರಣ ನೀಡಿ ಮಡಿಕೇರಿ ಮುತ್ತಿಗೆ