ಕೇರಳ : ಶಬರಿಮಲೆಯಲ್ಲಿ ಸಧ್ಯಕ್ಕೆ ಭೇಟಿ ನೀಡಿರುವ ಭಕ್ತಾದಿಗಳು ಹಿಂದಿರುಗುವವರೆಗೂ ಪ್ರವೇಶಾವಕಾಶಕ್ಕೆ ನಿರ್ಬಂಧ ಮುಂದುವರೆಯಲಿದೆ. ಶಬರಿಮಲೆಯಲ್ಲಿ ಸ್ವಾಮಿ ಅಯ್ಯಪ್ಪನ ದೇಗುಲಕ್ಕೆ ಭಕ್ತಾದಿಗಳು ಪ್ರವಾಹೋಪಾದಿಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಧ್ಯಕ್ಕೆ ಪ್ರವೇಶಾವಕಾಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೇ ವೇಳೆ, ಜನರ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಕೇರಳ ಸರ್ಕಾರ ನಿರಾಕರಿಸಿದೆ. ಕೇರಳ ಹೈಕೋರ್ಟ್ ಗೆ ಸರ್ಕಾರ ಸಲ್ಲಿಸಿರುವ ಲಿಖಿತ ವರದಿಯಲ್ಲಿ ನಮ್ಮ ಸಿಸಿಟಿವಿ