ಭಾರತ ಬಂದ್ ಎರಡನೇ ದಿನದ ಮುಷ್ಕರದಿಂದ ವಿಶೇಷವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬಂದ್ ಮಾಡಿರುವುದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ವಾಹನಗಳು ಜನರಿಂದ ಹೆಚ್ಚು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೇರೆ ಊರುಗಳಿಗೆ ಪ್ರಯಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿಂದ ಜನ ಕಕ್ಕಾಬಿಕ್ಕಿಯಾದರು. ಬಿಕೋ ಎನ್ನುವ ಬಸ್ ನಿಲ್ದಾಣದ ಮುಂದೆ ಇಂದು ಸಹ ಕಾದು ಕುಳಿತ ಜನ ಇನ್ನೂ ಸಂಚಾರ ಆರಂಭಗೊಳ್ಳದಿರುವ ಬಗ್ಗೆ ಸುದ್ದಿ