ಪ್ರತ್ಯೇಕ ತಾಲೂಕಿಗೆ ಒತ್ತಾಯಿಸಿದ ಬಂದ್ ಯಶಸ್ವಿ!

ಕೊಡಗು, ಸೋಮವಾರ, 11 ಫೆಬ್ರವರಿ 2019 (18:35 IST)

ಪ್ರತ್ಯೇಕ ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ನಡೆಸಲಾದ ಕುಶಾಲನಗರ ಬಂದ್  ಯಶಸ್ವಿಯಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಕುಶಾಲನಗರ ವ್ಯಾಪ್ತಿಯನ್ನು ಕಾವೇರಿ ತಾಲೂಕಾಗಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿರುವ ಹೋರಾಟ ಸಮಿತಿ ಸದಸ್ಯರು ಬೇಡಿಕೆ ಈಡೇರಿಕೆಗೆ ಸರಕಾರವನ್ನು ಒತ್ತಾಯ ಮಾಡಿದರು.  

ಕಾವೇರಿ ತಾಲ್ಲೂಕಿಗಾಗಿ ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ  ನಡೆಸುತ್ತಿರುವ  ಸಮಿತಿ ಸದಸ್ಯರು, ಈ ಬಾರಿಯ ಬಜೆಟ್ ನಲ್ಲಿಯೂ ಕಾವೇರಿ ತಾಲ್ಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿದರು. ಬೆಳಿಗ್ಗೆನಿಂದಲೇ ನಗರದ ವಿವಿಧ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದವು.

ಕುಶಾಲನಗರದ ಕಾರ್ಯಪ್ರವೃತ್ತದಲ್ಲಿ ವಿ. ಪಿ. ಶಶಿಧರ್ ನೇತೃತ್ವದಲ್ಲಿ ವಿವಿಧ  ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉತ್ತರ ಕರ್ನಾಟಕ ಪಕ್ಷ ಸ್ಥಾಪನೆಗೆ ಜನಾಭಿಪ್ರಾಯ ಸಂಗ್ರಹ ಶುರು!

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಬೇಕು ಎಂಬುದು ಬಹುತೇಕರ ಅಭಿಪ್ರಾಯ ವ್ಯಕ್ತವಾಗುತ್ತಿರುವ ...

news

ಕೈ ಅತೃಪ್ತ ಶಾಸಕ ಜಾಧವ್ ಕ್ಷೇತ್ರದಲ್ಲಿ ಜನರ ಆಕ್ರೋಶ

ಕಾಂಗ್ರೆಸ್ ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಶಾಸಕ ಉಮೇಶ್ ಜಾಧವ ಕ್ಷೇತ್ರದಲ್ಲಿ ಜನರು ಪ್ರತಿಭಟನೆ ...

news

50ಕ್ಕೂ ಹೆಚ್ಚು ಹೋರಾಟರಾರರ ಬಂಧನ ಮಾಡಿದ್ಯಾಕೆ?

ರಸ್ತೆತಡೆ ನಡೆಸಿ ಪ್ರತಿಭಟನೆಗೆ ಕುಳಿತಿದ್ದ 50ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ...

news

ಬಿಜೆಪಿ ಕೊಲೆಗಾರರನ್ನು ರಕ್ಷಣೆ ಮಾಡುತ್ತಿದೆಯಂತೆ!

ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೊಲೆಗಳು‌ ನಡೆದಾಗ ಧರ್ಮದ ಬಣ್ಣ ಹಚ್ಚಿ ಬೆಂಕಿ ಹಚ್ಚಿದ್ದ ...