ಬೆಂಗಳೂರು: ಕೊರೋನಾ ಪ್ರಕರಣಗಳು ಕಡಿಮೆಯಾಗಿದ್ದು, ಅನ್ ಲಾಕ್ ಗೆ ಸಿದ್ಧವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗ ವಲಸಿಗರದ್ದೇ ಭೀತಿ ಶುರುವಾಗಿದೆ.ಅನ್ ಲಾಕ್ ಆದ ತಕ್ಷಣ ಊರಿಗೆ ಮರಳಿರುವ ವಲಸಿಗರು ಬೆಂಗಳೂರಿಗೆ ವಾಪಸಾಗುತ್ತಾರೆ. ಇತ್ತೀಚೆಗೆ ಹಳ್ಳಿಗಳಲ್ಲಿ ಕೊರೋನಾ ಪ್ರಕರಣಗಳು ವ್ಯಾಪಕವಾಗಿವೆ. ಈ ಹಿನ್ನಲೆಯಲ್ಲಿ ಈ ವಲಸಿಗರು ಬೆಂಗಳೂರಿಗೆ ವಾಪಸಾದಾಗ ಸೋಂಕಿನ ಪ್ರಮಾಣ ಏರಿಕೆಯಾಗುವ ಭೀತಿಯಲ್ಲಿ ನಗರವಿದೆ.ಇದೀಗ ಬೆಂಗಳೂರಿನ ಪಾಸಿಟಿವಿ ದರ ಶೇ.5 ರ ಸಮೀಪ ಬಂದಿದೆ. ಮೂರು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು