ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ತಲೆನೋವು ಎಲ್ಲರಿಗೂ ಗೊತ್ತಿರುವುದೇ. ಇದೀಗ ರಾಜ್ಯ ರಾಜಧಾನಿ ಸಂಚಾರ ದಟ್ಟಣೆಯ ವಿಚಾರದಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಪಡೆದಿದೆ. ವಿಶ್ವದಲ್ಲೇ ಅತೀ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಟಾಪ್ 10 ನಗರಗಳ ಪೈಕಿ ಬೆಂಗಳೂರಿಗೆ ನಂ.1 ಸ್ಥಾನ ಲಭಿಸಿದೆ. ಈ ಮೂಲಕ ಜಾಗತಿಕವಾಗಿ ಕುಖ್ಯಾತಿಗೆ ಪಾತ್ರವಾಗಿದೆ.ಡೆನ್ಮಾರ್ಕ್ ನ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರು ಅಲ್ಲದೆ, ಟಾಪ್ 10 ರೊಳಗಿನ ಪಟ್ಟಿಯಲ್ಲಿ ಭಾರತದ