ಅನ್ ಲಾಕ್ ಬಗ್ಗೆ ಸುದ್ದಿ ಕೇಳಿಯೇ ಬೆಂಗಳೂರು ಟ್ರಾಫ್ ಜಾಮ್!

ಬೆಂಗಳೂರು| Krishnaveni K| Last Modified ಬುಧವಾರ, 9 ಜೂನ್ 2021 (08:29 IST)
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಕೊರೋನಾ ನಿಯಂತ್ರಣದಲ್ಲಿದೆ, ಸದ್ಯದಲ್ಲೇ ಅನ್ ಲಾಕ್ ಆರಂಭವಾಗಬಹುದು ಎಂಬ ಸುದ್ದಿ ಕೇಳಿಯೇ ಜನ ರಸ್ತೆಗಿಳಿಯುತ್ತಿದ್ದಾರೆ.

 
ಪರಿಣಾಮ, ಬೆಂಗಳೂರಿನಂತಹ ನಗರಗಳಲ್ಲಿ ದಿನೇ ದಿನೇ ವಾಹನಗಳ ಓಡಾಟ ಹೆಚ್ಚುತ್ತಿದೆ. ಅನ್ ಲಾಕ್ ಸುದ್ದಿ ಕೇಳಿಯೇ ಟ್ರಾಫಿಕ್ ಜಾಮ್ ಆಗಿದೆ.
 
ಇನ್ನು, ಇದ್ದಕ್ಕಿದ್ದಂತೆ ಅನ್ ಲಾಕ್ ಮಾಡಿದಾಗ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ. ಒಂದು ವೇಳೆ ಅನ್ ಲಾಕ್ ಮಾಡಿದ ತಕ್ಷಣ ಜನರು ಮುಗಿಬಿದ್ದು ರಸ್ತೆಗಿಳಿದರೆ ಮತ್ತೆ ಪರಿಸ್ಥಿತಿ ಕೈ ಮೀರಿ ಹೋಗಬಹುದು. ಹೀಗಾಗಿ ಮತ್ತೆ ಲಾಕ್ ಡೌನ್ ಆಗದಂತಹ ಸಂದರ್ಭವನ್ನು ತಪ್ಪಿಸಲು ಜನರೇ ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು.
ಇದರಲ್ಲಿ ಇನ್ನಷ್ಟು ಓದಿ :