ಬೆಂಗಳೂರು ಕೇಂದ್ರ ವಿವಿಯ ಪರೀಕ್ಷಾ ದಿನಾಂಕ ಪ್ರಕಟ

bengaluru| Geethanjali| Last Modified ಬುಧವಾರ, 21 ಜುಲೈ 2021 (19:42 IST)
ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಿ, ಪ್ರಕಟಣೆ ಹೊರಡಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮುಂದೂಡಲಾದ ಪದವಿ ಪರೀಕ್ಷೆಗಳು ಆಗಸ್ಟ್​ 10ರಿಂದ ಆರಂಭಗೊಳ್ಳಲಿದ್ದು, ಆ. 31ರೊಳಗೆ ಬಾಕಿ ಉಳಿದಿರುವ ಎಲ್ಲ ಪದವಿ ಪರೀಕ್ಷೆಗಳು ನಡೆಲಾಗುತ್ತದೆ.
ಆ.28 ರಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಇದರ ಫಲಿತಾಂಶವನ್ನು ಸೆಪ್ಟೆಂಬರ್​ 20ರೊಳಗೆ ಪ್ರಕಟಿಸಿ, ಸ್ನಾತಕೋತ್ತರ ಪದವಿಗೆ ಅನುವು ಮಾಡಿಕೊಡಲಾಗುತ್ತಿದೆ.ಸ್ನಾತಕೋತ್ತರ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಅಂಕಗಳು ಹಾಗೂ ಹಿಂದಿನ ಸೆಮಿಸ್ಟರ್ ಅಂಕ ಆಧರಿಸಿ ಪ್ರಕಟಿಸಲಾಗುತ್ತದೆ. ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆಯನ್ನು ಆಗಸ್ಟ್ 2ನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.2021-22ನೇ ಶೈಕ್ಷಣಿಕ ವರ್ಷ ಅಕ್ಟೋಬರ್​ 1ರಿಂದ ಆರಂಭವಾಗಲಿದೆ ಎಂದು ವಿವಿ ಪ್ರಕಟಣೆ ಹೊರಡಿಸಿದೆ.
ಇದರಲ್ಲಿ ಇನ್ನಷ್ಟು ಓದಿ :