ವಿಜಯಪುರ: ಪಕ್ಷದ ವಿರೋಧ ಮಾತನಾಡಿದ್ದಕ್ಕೆ ವಿಜಯಪುರ ನಗರದ ಶಾಸಕ ಬಸನಗೌಡ ಯತ್ನಾಳ್ ಗೆ ಶೋಕಾಸ್ ನೀಡಿದ ಹಿನ್ನಲೆಯಲ್ಲಿ ಇದೀಗ ಯತ್ನಾಳ್ ಈ ನೋಟಿಸ್ ಗೆ ಉತ್ತರ ನೀಡಿದ್ದಾರೆ. ಅಕ್ಟೋಬರ್ 15 ರಂದು ರಿಜಿಸ್ಟರ್ಡ್ ಪೋಸ್ಟ್, ಇ-ಮೇಲ್ ಮೂಲಕ ಶೋಕಾಸ್ ನೋಟಿಸ್ ಗೆ ಉತ್ತರ ನೀಡಿರುವ ಯತ್ನಾಳ್ , ನಾನು ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ. ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ರಾಜ್ಯಸ