ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ಆ ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಟಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು ಎಂದರು. ಈ ಸಮಾಜಕ್ಕೆ ಬಸವಣ್ಣನವರು