ಕೆಂಪು ಗೂಟದ ಕಾರು ನಿಷೇಧದ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಬಸವರಾಜ ರಾಯರೆಡ್ಡಿ ಇದು ಕೇವಲ ಪೋಸ್ ಅಷ್ಟೇ ಇದರಿಂದ ಯಾವುದೇ ಬದಲಾವಣೆ ಬರಲ್ಲ. ವಿಐಪಿ ಸಂಸ್ಕೃತಿ ಬೇಡ ಎಂದಾದರೆ, ಮೋದಿ ಸೆಕ್ಯೂರಿಟಿ ತೆಗೆದು ಹಾಕಲಿ ಎಂದರು. ಮೋದಿಗೆ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆಯಲ್ಲ ಎಂದು ವರದಿಗಾರ ಕೇಳಿದ್ದಕ್ಕೆ ಸಾಯಲಿ, ಅಧಿಕಾರ ಬೇಕೆಂದರೆ ಸಾಯ ಬೇಕಪ್ಪಾ. ಅಧಿಕಾರ ಬೇಡವೆಂದರೆ ಮನೆಯಲ್ಲೇ ಕೂರಲಿ ಎಂದು ಉತ್ತರಿಸಿದ್ದಾರೆ.