ರಾಜ್ಯದಲ್ಲಿ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿ ಹೋಗಿದೆ. ಪ್ರಕರಣದಲ್ಲಿ ರಾಜಕಾರಣ ಮಾಡದೇ ಸೂಕ್ತ ಕ್ರಮ ಜರುಗಿಸಿ, ಉಳ್ಳವರ ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಕಲಾಪ ಆರಂಭವಾದಾಗ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ನಂತರ ಮಾತನಾಡಿ, ಮಾರಣಾಂತಿಕ ಹಲ್ಲೆ ಮಾಡಿದವನ ಬಂಧಿಸುವ ಸಂದರ್ಭದಲ್ಲಿ ಜೈಕಾರ ಹಾಕಲಾಗಿದೆ. ಮಾಧ್ಯಮದವರ ಮೇಲೂ ಹಲ್ಲೆ ಮಾಡಲಾಗಿದೆ.