ಬಷೀರ್, ದೀಪಕ್ ಸಹೋದರರಿದ್ದಂತೆ– ಸಚಿವ ಖಾದರ್

ಮಂಗಳೂರು| Hanumanthu.P| Last Modified ಭಾನುವಾರ, 7 ಜನವರಿ 2018 (19:08 IST)
ಕೊಲೆಯಾಗಿರುವ ಬಷೀರ್ ಹಾಗೂ ದೀಪಕ್‍ರಾವ್ ನನ್ನ ಸಹೋದರರಿದ್ದಂತೆ. ಕರಾವಳಿಯಲ್ಲಿ ಇಂತಹ ಘಟನೆಗಳು ನಡೆದಿರುವುದು ದುರದೃಷ್ಟಕರ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕರಾವಳಿಯಲ್ಲಿ ಶಾಂತಿ-ಸೌಹಾರ್ದತೆಯ ಅಗತ್ಯವಿದೆ. ಯಾವುದೇ ಸಮಸ್ಯೆಗೆ ಕೊಲೆ ಪರಿಹಾರವಲ್ಲ. ಎರಡೂ ಸಮುದಾಯದವರು ಕುಳಿತು ಸೌಹಾರ್ದಯುತ ವಾತಾವರಣ ಉಂಟುಮಾಡುವ ಕೆಲಸ ಮಾಡಬೇಕು. ಹತ್ಯೆ ಘಟನೆಗಳು ಖಂಡನೀಯ ಎಂದಿದ್ದಾರೆ.
ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು. ಎರಡೂ ಕುಟುಂಬದವರಿಗೆ ನೋವಾಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :