ಜಿಂದಾಲ್ ಗೆ ಭೂಮಿ ನೀಡುತ್ತಿರೋ ಸರ್ಕಾರ ಕಿಕ್ ಬ್ಯಾಕ್ ಪಡೆದುಕೊಂಡು ಭೂಮಿ ನೀಡುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.ನಾನು 13 ರಂದು ದೆಹಲಿಗೆ ಹೋಗಬೇಕಿದೆ. ಹೀಗಾಗಿ 14,15,16 ರಂದು ಧರಣಿ ಪ್ರತಿಭಟನೆ ನಡೆಸುತ್ತೇವೆ ಎಂದರು. ನಾಡಿನಲ್ಲಿ ಬರ ತಾಂಡವವಾಡುತ್ತಿದೆ, ಹಳ್ಳಿಗಳಿಗೆ ಹೋದಾಗ ಸಮಸ್ಯೆಗಳನ್ನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ.ಗ್ರಾಮ ವಾಸ್ತವ್ಯ ಅರ್ಥ ಹೀನಾವಾಗಿದ್ದು, ಸಿಎಂ ಕುಮಾರಸ್ವಾಮಿ ಒಂದು ಕಡೆಯೂ ಬರದ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.