ಬೆಂಗಳೂರು ನಗರ ಭಾರತದಲ್ಲೇ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಉದ್ಯೋಗಕ್ಕಾಗಿ ಅಪಾರ ಸಂಖ್ಯೆಯಲ್ಲಿ ನಗರಕ್ಕೆ ಬಂದು ನೆಲೆಸುತ್ತಾರೆ. ಈ ವೇಳೆ ಜನರಿಗೆ ಸ್ಥಳ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸ್ವಲ್ಪ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಈ ಸಂಬಂಧ ನಾವೆಲ್ಲರೂ ನಗರದಾದ್ಯಂತ ಹೆಚ್ಚು ಸಸಿಗಳನ್ನು ನೆಟ್ಟು ಅವು ಬೆಳೆಯುವವರೆಗೆ ಪೋಷಿಸಬೇಕೆಂದು ತುಷಾರ್ ಗಿರಿ ನಾಥ್ ರವರು ಹೇಳಿದ್ರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಕೋಟಿ ವೃಕ್ಷ ಸೈನ್ಯವು