ಗಂಡನಿಂದ ವಂಚನೆ, ಹಲ್ಲೆಯಾಗಿರುವ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬಿಬಿಎಂಪಿಯ ಮಾಜಿ ಉಪ ಮೇಯರ್ ಬೆದರಿಕೆ ಹಾಕಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಮಾಜಿ ಉಪಮೇಯರ್ ಶಹತಾಜ್ ಖಾನಂ ಅವರು ಫೇಸ್ಬುಕ್ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಲಾಕ್ ನೀಡಿದ್ದಾಗಿ ಹೇಳಿ ಜೊತೆಗಿರಲು, ಸಂಸಾರ ಮಾಡಲು ಪತಿ ನಿರಾಕಾರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪತಿ ಅನ್ವರ್, 2011ರಲ್ಲಿ ತಲಾಕ್ ನೀಡಿದ್ದರು.