ಬಿಬಿಎಂಪಿ ಬೆಂಗಳೂರಿಗರಿಗೆ ಸಿಹಿ ಸುದ್ದಿ ಕೊಡಲು ಮುಂದಾಗಿದೆ. ಇದಕ್ಕಾಗಿ ಇನ್ನೆರಡು ತಿಂಗಳಲ್ಲಿ ಕೋಟಿ ಕೋಟಿ ವೆಚ್ಚ ಮಾಡಲಿದೆ. ನಗರದಾದ್ಯಂತ ಮೂಲಭೂತ ಸೌಕರ್ಯದ ಕೊರತೆ ನಿಗಿಸಲು ಯೋಜನೆ ರೂಪಿಸಿದ್ದು, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬೆಂಗಳೂರು ಈಗಾಗಲೆ ಕಾಂಕ್ರಿಟ್ ಕಾಡಾಗಿ ಬೆಳೆದು ನಿಂತಿದೆ. ಹೆಜ್ಜೆ ಹೆಜ್ಜೆಗು ಜನ- ವಾಹನಗಳದ್ದೆ ಕಾರ್ಬಾರು. ಅಪ್ಪಿ ತಪ್ಪಿ ಮೂತ್ರ ವಿಸರ್ಜನೆ ಮಾಡಬೇಕು ಅಂದ್ರೆ ಕಿಲೋಮೀಟರ್ ಗಟ್ಟಲೇ ಜಾಗ ಹುಡುಕಬೇಕು. ಪುರುಷರು ಹೇಗೋ ಅಲ್ಲಿ ಇಲ್ಲಿ ಖಾಲಿ ಜಾಗದಲ್ಲಿ