ಈ ಬಾರಿ ಮೇಯರ್ ಸ್ಥಾನ ನಮಗೆ ಬಿಟ್ಟು ಕೊಡಿ ಎಂದು ಬೇಡಿಕೆ ಇಡುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ಗೆ ಶಾಕ್ ನೀಡಿದ್ದಾರೆ. ಎರಡನೇಯ ಅವಧಿಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಸಿಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು, ಈ ಬಾರಿ ಬಿಬಿಎಂಪಿಯಲ್ಲಿ ಮೇಯರ್ ಸ್ಥಾನ ನಮಗೆ ಬಿಟ್ಟು ಕೊಡಿ, ಮುಂದಿನ ಮೂರು ವರ್ಷಗಳ ಕಾಲ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇವೆ.