ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್ ಮತ್ತು ಹಿಂದವೀ ಮಾಂಸದಂಗಡಿಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಅನಧಿಕೃತವಾಗಿ ಆರಂಭಗೊಂಡ ಮಾಂಸದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವೇ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ನೋಟಿಸ್ ನಲ್ಲಿ ತಿಳಿಸಿದೆ. ಒಂದು ವಾರದ ಅವಧಿಯಲ್ಲಿ ಶುಲ್ಕ ಪಾವತಿಸಿ ಅನುಮತಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಅಂಗಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರು ನೋಟಿಸ್ ಬಗ್ಗೆ ವಿವರಿಸಿದ್ದಾರೆ. ಕೋಳಿ ಮಾಂಸ ಮಾರಾಟಕ್ಕೆ 2500