ಬೆಂಗಳೂರು : ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವ ಆಮಿಷ, ವಿಧೆಯವರಿಗೆ ಮಾಸಾಶನ ಕೊಡಿಸುವ ಆಮಿಷ ಸೇರಿದಂತೆ ಹಲವು ರೀತಿಗಳಲ್ಲಿ ಇವರು ವಂಚನೆ ನಡೆಸುತ್ತಿದ್ದರು ಬಿಬಿಎಂಪಿಯಿಂದ ಕಡಿಮೆ ದರದಲ್ಲಿ ಸೈಟು, ಕಾರು ಕೊಳ್ಳಲು ಸಾಲು ಹಾಗೂ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಯುಕವರನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ (22) ಹಾಗೂ ಹರೀಷ್ (21) ಬಂಧಿತ ಆರೋಪಿಗಳು. ಸುಮಾರು 60 ಜನರಿಗೆ ಇವರು ವಂಚನೆ ನಡೆಸಿದ್ದಾರೆ. ಈ ಬಗ್ಗೆ ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.