ಬಿಬಿಎಂಪಿ ವಾರ್ಡ್ ವಿಂಗಡನೆಯನ್ನು ಬಿಜೆಪಿಯವರ ಕಚೇರಿ, ಕೇಶವ ಕೃಪಾ, ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ಬಿಜೆಪಿ ನೀಡಿದ ಡಿಲಿಮಿಟೇಷನನ್ಗೆ ಕಮಿಷನರ್ ಸಹಿ ಹಾಕಿದ್ದಾರೆ ಅಷ್ಟೇ. ಪಾಲಿಕೆಯ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರ್ವೆ ಮಾಡಿಲ್ಲ. ಯಾವ ಅಧಿಕಾರಿಗಳಿಗೂ ಡಿಲಿಮಿಟೇಷನ್ ಬಗ್ಗೆ ಮಾಹಿತಿ ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳಿಗೂ ವಾರ್ಡ್ ಮರು ವಿಂಗಡಣೆ