ಪ್ರತಿಬಾರಿ ಸಚಿವಸ್ಥಾನ ಚರ್ಚೆ ಆಗೋವಾಗ ಶಾಸಕ ಬಿ.ಸಿ.ಪಾಟೀಲ್ ಬಾಂಬ್ ಸಿಡಿಸುತ್ತಲೇ ಇದ್ದಾರೆ.ಕಾಂಗ್ರೆಸ್ ಪಕ್ಷವನ್ನ ಬೀಡುವುದಿಲ್ಲ. ಹೀಗಂತ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.ಆಪರೇಷನ್ ಕಮಲವನ್ನ ಬಿಜೆಪಿ ಅವರನ್ನೆ ಕೇಳಿ ನಾನು ಕಾಂಗ್ರೆಸ್ ಪಕ್ಷದವನು ಎಂದಿದ್ದಾರೆ.ಈ ಬಾರಿ ಸಚಿವ ಸಂಪುಟದ ವಿಸ್ತರಣೆಯಲ್ಲಿ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಅನ್ನೊ ಭರವಸೆ ಇದೆ. ಸ್ವತಃ ನೇರವಾಗಿ ಸಿದ್ದರಾಮಯ್ಯ ಅವರೇ ಪೋನ್ ಮಾಡಿ ತಿಳಿಸಿದ್ದಾರೆ ಎಂದಿದ್ದಾರೆ.ಗುಂಡೂರಾವ್ ಸಹ ಹೇಳಿದ್ದಾರೆ ಸಚಿವ ಸ್ಥಾನ ಫಿಕ್ಸ್ ಇದೆ ಅಂತ.