ಅಪರೇಷನ್ ಕಮಲಕ್ಕೆ ಒಳಗಾದ್ರಾ ಶಾಸಕ ಬಿ.ಸಿ ಪಾಟೀಲ್? ಈ ಬಗ್ಗೆ ಅವರ ಪ್ರತಿಕ್ರಿಯೆ ಏನು?

ಬೆಂಗಳೂರು, ಶನಿವಾರ, 9 ಫೆಬ್ರವರಿ 2019 (13:04 IST)

ಬೆಂಗಳೂರು : ಹಿರೆಕೇರೂರು ಶಾಸಕ ಬಿ.ಸಿ ಪಾಟೀಲ್ ಅವರು ಮುಂಬೈ ರೆಸಾರ್ಟ್ ಗೆ ತೆರಳಿ ಅತೃಪ್ತ ಶಾಸಕರ ಜೊತೆ ಸೇರಿಕೊಂಡಿದ್ದಾರೆ ಎಂಬ ಸುದ್ಧಿ ರಾಜಕೀಯವಲಯದಲ್ಲಿ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಶಾಸಕ ಬಿ.ಸಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು,’ ನನಗೆ ಬೇಸರ ಆಗಿದ್ದು ಸತ್ಯ. ಸಚಿವ ಸ್ಥಾನ ನೀಡುವಾಗ ನಮ್ಮ ಜಿಲ್ಲೆಯನ್ನು ಪರಿಗಣಿಸಿಲ್ಲ. ನನಗೂ ಆದ್ಯತೆ ನೀಡಿಲ್ಲ ಅನ್ನೋ ಬೇಸರ ಇದೆ. ಹಾಗಂತ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

 

‘ಇಂದು ಬೆಳಗ್ಗೆ ಸಿದ್ದರಾಮಯ್ಯರನ್ನ ಭೇಟಿ ಮಾಡಿ ನನ್ನ ನೋವನ್ನ ಹೇಳಿಕೊಂಡಿದ್ದೇನೆ. ನಾನು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು. ನಾನು ಎಲ್ಲೂ ಹೋಗಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಈಗ ನನ್ನ ಕ್ಷೇತ್ರ ಹಿರೆಕೇರೂರಿಗೆ ಹೋಗುತ್ತಿದ್ದೇನೆ. ಸೋಮವಾರದಿಂದ ಅಧಿವೇಶನಕ್ಕೆ ಬರುತ್ತೇನೆ’ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂವಿಧಾನಬದ್ಧ ಸರ್ಕಾರ ಉರುಳಿಸಲು ಮೂವರಿಂದ ತಂತ್ರ- ರಣದೀಪ್ ಸಿಂಗ್ ಸುರ್ಜೇವಾಲ

ನವದೆಹಲಿ : ಸಂವಿಧಾನಬದ್ಧ ಸರ್ಕಾರ ಉರುಳಿಸಲು ಪ್ರಧಾನಿ ಮೋದಿ, ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಈ ಮೂವರು ...

news

ಸಿದ್ದರಾಮಯ್ಯ ರನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ- ನಿರಂಜನಾನಂದಪುರಿ ಸ್ವಾಮೀಜಿ

ಮೈಸೂರು : ಈ ರಾಜ್ಯದ ಏಳಿಗೆಗಾಗಿ ದುಡಿದ ಒಬ್ಬ ನಾಯಕನನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ...

news

ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ- ಹೊಸ ಬಾಂಬ್ ಸಿಡಿಸಿದ ಶಾಮನೂರು ಶಿವಶಂಕರಪ್ಪ

ಬೆಂಗಳೂರು : ಸಿಎಂ ಕುಮಾರಸ್ವಾಮಿ ತಮ್ಮ ಬಳಿಯಿದ್ದ ಅಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿ ರಾಜಕೀಯದಲ್ಲಿ ಹೊಸ ...

news

ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಸಂಭ್ರಮ (ಫೋಟೋ ಗ್ಯಾಲರಿ)

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ 15 ರವರೆಗೆ ಬಾಹುಬಲಿ ಮೂರ್ತಿಗೆ ಮಸ್ತಕಾಭಿಷೇಕದ ...