ಶನಿವಾರ ಬೆಳಗ್ಗೆ ಧೀಡಿರ್ ಕಾರ್ಯಾಚರಣೆ ಆರಂಭಿಸಿದ ಬಿಡಿಎ ಅಧಿಕಾರಿಗಳು ಮೀಸಲು ಪೊಲೀಸ್ ಪಡೆಯ ಭದ್ರತೆಯಲ್ಲಿ ಮನೆಗಳನ್ನು ತೆರವುಗೊಳಿಸುತ್ತಿರುವ ಮನಕುಲುಕುವಂಥಹ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಹೊರವಲಯ ಯಲಹಂಕ ವಿಧಾನಸಭಾ ಕ್ಷೇತ್ರದ ಅಟ್ಟೂರು ಹಾಗೂ ಬೆಟ್ಟಹಳ್ಳಿ ಗ್ರಾಮದಲ್ಲಿ ಮನೆಗಳನ್ನುಹೊಡೆಯುತ್ತಿದ್ದಾರೆ. ಮನೆಗಳಲ್ಲಿದ್ದ ವಸ್ತುಗಳನ್ನು ಕೂಡ ಹೊರಗೆ ಸಾಗಿಸಲು ಬಿಡಲಿಲ್ಲ ತೆರವು ಕಾರ್ಯಾಚರಣೆ ಮುಂದುವರೆಸಿದರು. ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಸಾಗಿಸುವುದಕ್ಕೆ ಅವಕಾಶ ಕೊಡಿ ಎಂದು ಅಧಿಕಾರಿಗಳ ಹತ್ತಿರ ಅಂಗಲಾಚಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ .