ನಿನ್ನೆಯಷ್ಟೇ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಹೆಚ್ಚು ಟ್ರೋಲ್ ಆಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಇವತ್ತು ರಾಷ್ಟ್ರ ಭಾಷೆಯ ಕಾರಣಕ್ಕಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿ ಕನ್ನಡಿಗರ ಎದೆಯಲ್ಲಿ ರೋಷಾಗ್ನಿ ಹೆಚ್ಚಿಸಿದ್ದರು. ಕಂಗನಾ ಕೂಡ ಅಜಯ್ ದೇವಗನ್ ಮಾತಿಗೆ ಅನುಮೋದನೆ ನೀಡುವುದಷ್ಟೇ ಅಲ್ಲ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್