ಉಪಚುನಾವಣೆಗೆ ಮುನ್ನವೇ ಸಿಎಂ ಸಿದ್ದರಾಮಯ್ಯ ಸೋಲೋಪ್ಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉಪಚುನಾವಣೆ ಕಳಲೆ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಪ್ರಸಾದ್ ಮಧ್ಯೆ ನಡೆಯುತ್ತಿದೆಯೇ ಹೊರತು ನನ್ನ ವಿರುದ್ಧವಲ್ಲ ಎಂದು ಹೇಳಿಕೆ ನೀಡಿ ಯುದ್ಧಕ್ಕೆ ಮೊದಲ ಶಸ್ತ್ರಾಸ್ತ್ರ ಕೆಳಗಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹತಾಶರಾಗಿರುವುದು ನಾನೋ ಸಿಎಂ ಸಿದ್ದರಾಮಯ್ಯನೋ ಎಂದು ಪ್ರಶ್ನಿಸಿದ ಅವರು, ಉಪಚುನಾವಣೆ ಪ್ರಚಾರದಲ್ಲಿ ಜನಸೇರುತ್ತಿರುವುದು ನೋಡಿದಲ್ಲಿ ನಾನು ಪ್ರಚಾರಕ್ಕಾಗಿ ಆಗಮಿಸಿರುವುದೋ, ವಿಜಯೋತ್ಸವಕ್ಕಾಗಿ ಆಗಮಿಸಿರುವುದೋ ಎನ್ನುವ ಅನುಮಾನ