ಬೆಂಗಳೂರು: ಬೇಸಿಗೆ ಇನ್ನೂ ಬಂದಿಲ್ಲ. ಆಗಲೇ ರಾಜ್ಯದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆರಂಭವಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲೇ ಈಗಲೇ ಪರಿಸ್ಥಿತಿಯಾದರೆ, ಇನ್ನು ಬೇಸಿಗೆಯಲ್ಲಿ ಇನ್ಯಾವ ಪರಿಯಿರಬಹುದು ನೀವೇ ಊಹಿಸಿ. ಇತ್ತೀಗೆಷ್ಟೇ ಇಂಧನ ಸಚಿವ ಶಿವಕುಮಾರ್, ಬೇಸಿಗೆಯಲ್ಲಿ ಈ ಬಾರಿ ವಿದ್ಯುತ್ ಕೈ ಕೊಡಬಹುದು. ಆದರೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ಅಭಾವವಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು.ಆದರೆ ಈಗ ಬೆಸ್ಕಾಂ ರಿಪೇರಿ ನೆಪದಲ್ಲಿ ದಿನವಿಡೀ ವಿದ್ಯುತ್ ನೀಡದೇ ಉಳಿತಾಯ ಯೋಜನೆ ಮಾಡುತ್ತಿದೆ!