ರಾಯಚೂರು: ಆಕೆಗೆ ರಸ್ತೆ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಹಾಯಕ್ಕೆ ಯಾರೊಬ್ಬರೂ ಜತೆಯಲ್ಲಿರಲಿಲ್ಲ. ಆಸ್ಪತ್ರೆಗೆ ಹೋಗುವಷ್ಟು ವ್ಯವಧಾನವಿರಲಿಲ್ಲ. ಆದರೂ ಸುರಕ್ಷಿತವಾಗಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತಳು. ಇದಕ್ಕೆಲ್ಲಾ ಕಾರಣ ಓರ್ವ ಭಿಕ್ಷುಕ ಮಹಿಳೆ. ಇದು ನಡೆದಿರುವುದು ರಾಯಚೂರು ಮಾನ್ವಿಯಲ್ಲಿ. ಯೆಲ್ಲಮ್ಮ (30) ಎಂಬ ಮಹಿಳೆ ರಸ್ತೆ ಮಧ್ಯೆ ಮಗುವಿಗೆ ಜನ್ಮವಿತ್ತ ಮಹಿಳೆ. ಆಕೆಗೆ ಸಹಾಯ ಮಾಡಿದ್ದು 60 ವರ್ಷ ಸುಮಾರಿನ ಭಿಕ್ಷುಕ ಮಹಿಳೆ.ಎಲ್ಲರೂ ನೋಡುತ್ತಿದ್ದರೆ, ಪಕ್ಕದಲ್ಲಿದ್ದ ಭಿಕ್ಷುಕ ಮಹಿಳೆ ಯೆಲ್ಲಮ್ಮನ