Widgets Magazine

ಹಣ ಲೂಟಿಗಾಗಿ ನಡೆಯುತ್ತಿದೆ ಪ್ರಶ್ನೆ ಪತ್ರಿಕೆ ಸೋರಿಕೆ: ಪೋಷಕರ ಆರೋಪ

ಬೆಂಗಳೂರು| Rajesh patil| Last Modified ಗುರುವಾರ, 31 ಮಾರ್ಚ್ 2016 (18:24 IST)
ಹಣವನ್ನು ಲೂಟಿ ಹೊಡೆಯಲು ಪ್ರಶ್ನೆಪತ್ರಿಕೆ ಸೋರಿಕೆ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಹಗರಣದಲ್ಲಿ ಪಿಯು ಬೋರ್ಡ್ ಅಧಿಕಾರಿಗಳು,ಹೊಸ ಕಾಲೇಜುಗಳು ಟ್ಯುಟೋರಿಯಲ್‌ಗಳ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸಿದ್ದತೆಗಾಗಿ ನಾಲ್ವರು ಉಪನ್ಯಾಸಕರಿಗೆ ನೀಡಲಾಗುತ್ತಿದ್ದು, ಪ್ರಶ್ನೆಪತ್ರಿಕೆ ಸಿದ್ದತೆಯಿಂದ ಸೋರಿಕೆಯವರಿಗೆ ಆರೋಪಿಗಳು ರಣತಂತ್ರ ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


ನಮ್ಮ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಪ್ರಿಂಟ್ ಹಾಕಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.ರವಾನೆ ವೇಳೆ ಸಹ ಪೇಪರ್ ಲೀಕ್ ಆಗುವ ಸಾಧ್ಯತೆಗಳಿವೆ ಎಂದು ವಿದಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :