ಕನ್ನಡ ಸದಸ್ಯರ ಜಗಳದ ಲಾಭ ಪಡೆದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಜೋತಾ ಬಾಂದೇಕರ್ ಮೇಯರ್ ಆಗಿ,ಉಪ ಮೇಯರ್ ಆಗಿ ನಾಗೇಶ ಮಂಡೋಳ್ಕರ್ ಆಯ್ಕೆಯಾಗಿದ್ದಾರೆ. ಎಂಇಎಸ್ ಭಿನ್ನಮತದ ಲಾಭ ಪಡೆಯುವಲ್ಲಿ ಕೂಡಾ ವಿಫಲವಾದ ಕನ್ನಡ ಪರ ಸದಸ್ಯರು, ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿತ್ತು. ಆದರೆ, ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರಿಂದ ಸೋಲನುಭವಿಸಬೇಕಾಯಿತು. ಮತದಾನದ ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮಲ್ಲಿ ಬಹುಮತವಿಲ್ಲವಾದ್ದರಿಂದ ಮೇಯರ್ ಸ್ಥಾನ ಪಡೆಯುವ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಲಿಲ್ಲ ಎಂದು