ಬೆಂಗಳೂರು: ಸಿಲಿಕಾನ್ ಸಿಟಿಯ ಕುವರಿ ಲಂಡನ್ ಯುವಕನ ಜತೆ ಸಪ್ತಪದಿ ತುಳಿದಿದ್ದಾಳೆ. ಬೆಂಗಳೂರು ಮೂಲದ ಶೃತಿ ಕಂಪನಿ ಕೆಲಸದ ಮೇಲೆ ಕೆಲ ವರ್ಷಗಳಿಂದ ಲಂಡನ್ನಲ್ಲಿ ವಾಸವಾಗಿದ್ದರು. ಈ ವೇಳೆ ಲಂಡನ್ ಮೂಲದ ಪ್ಯಾಟ್ರಿಕ್ ಜತೆ ಶೃತಿಗೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು ವರ್ಷದಿಂದ ಶೃತಿ ಹಾಗೂ ಪ್ಯಾಟ್ರಿಕ್ ಪ್ರೀತಿಸುತ್ತಿದ್ದರು.ಇಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಶೃತಿ ತಮ್ಮ ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದಾರೆ. ಇತ್ತ ಪ್ಯಾಟ್ರಿಕ್ ಮನೆಯವರು ಒಪ್ಪಿದ್ದು, ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.