Photo Courtesy: Twitterಬೆಂಗಳೂರು: ಕರಾವಳಿಯಲ್ಲಿ ಜನಪ್ರಿಯವಾಗಿರುವ ಗ್ರಾಮೀಣ ಕ್ರೀಡೆ, ಕಲೆ ಕಂಬಳ ಇದೀಗ ಬೆಂಗಳೂರಿಗೆ ಬಂದಿದೆ. ಬೆಂಗಳೂರು ಕಂಬಳ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿಯ ವೈಭೋಗ ವೀಕ್ಷಿಸಬಹುದು.ನಿನ್ನೆ ಕಂಬಳ ಕೋಣಗಳು ಮಂಗಳೂರು ಭಾಗದಿಂದ ಬೆಂಗಳೂರಿಗೆ ಬಂದಿದ್ದು, ಕುದಿ ಕಂಬಳಕ್ಕೆ ನಿನ್ನೆಯೇ ಚಾಲನೆ ನೀಡಲಾಗಿದೆ. ನಾಳೆ ಮತ್ತು ನಾಡಿದ್ದು ಅಧಿಕೃತವಾಗಿ ಕಂಬಳ ಉತ್ಸವ ನಡೆಯಲಿದೆ. ನಾಳೆ ಬೆಳಿಗ್ಗೆ 10.30 ಕ್ಕೆ ಕಂಬಳ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ.