ಮೇ ತಿಂಗಳಲ್ಲಿ ಸತತ ಒಂದು ವಾರ ಮಳೆ ಬಂದಿದ್ದರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ವಿಳಂಬವಾಗಿದ್ದು, ಜೂನ್ 6ರೊಳಗೆ ನಗರದ ಎಲ್ಲಾ ಒಳ ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿಧರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ನಗರದಲ್ಲಿರುವ ಗುಂಡಿಗಳ ಸರಾಸರಿ ಅಳತೆ 2 ಅಡಿ ವಿಸ್ತೀರ್ಣವಿದ್ದು, 6 ರೊಳಗೆ ಎಲ್ಲಾ