ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಗ್ರಾಹಕನೇ ವ್ಯಾಪಾರಿಯನ್ನು ಕೊಲೆಗೈದ ಹೇಯ ಘಟನೆ ರವಿವಾರ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಹಳೆ ಬೈಯ್ಯಪ್ಪನ ಹಳ್ಳಿಯ ಅಂಬೇಡ್ಕರ್ ನಗರದ ಬೇಕರಿಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಮೃತನನ್ನು ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮುರಳಿ (48) ಎಂದು ಗುರುತಿಸಲಾಗಿದೆ. ರಾತ್ರಿ 12.15 ರ ಸುಮಾರಿಗೆ ಜಯರಾಜ್ ಎಂಬಾತ ಬೇಕರಿಗೆ ಆಗಮಿಸಿದ್ದು, ವ್ಯಾಪಾರಿ ಮುರಳಿ ಬಳಿ ಕೆಲ ತಿನಿಸನ್ನು ಕೇಳಿದ್ದಾನೆ. ಈ ಸಂದರ್ಭದಲ್ಲಿ ಮುರಳಿ ಏಕವಚನದಲ್ಲಿ ಮಾತನಾಡಿದ್ದರಿಂದ ಕೆರಳಿದ