ಬೆಸ್ಕಾಂ ಅಳವಡಿಸುತ್ತಿರುವ ಡಿಜಿಟಲ್ ಮೀಟರ್ಗಳು ಜನರಿಗೆ ಬರೆ ಎಳೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಬೆಸ್ಕಾಂ ಸಂಸ್ಥೆ ತಮ್ಮ ಗ್ರಾಹಕರ ಮನೆಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್ಗಳನ್ನು ಡಿಜಿಟಲ್ ಮೀಟರ್ಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಹಮ್ಮಿಕೊಂಡಿದೆ. ಈಗಾಗಲೆ ನಗರದ ಶೇ.60ರಷ್ಟು ಮನೆಗಳಲ್ಲಿ ಡಿಜಿಟಲ್ ಮೀಟರ್ ಆಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಡಿಜಿಟಲ್ ಮೀಟರ್ಗಳನ್ನು ಅಳವಡಿಸಿದ ನಂತರ ಈ ಹಿಂದೆ ಬರುತ್ತಿದ್ದ ವಿದ್ಯುತ್ ಬಿಲ್ ದುಪ್ಪಟ್ಟಾಗಿದ್ದು, ಡಿಜಿಟಲ್ ಮೀಟರ್ಗಳು ಜನರ ಜೇಬಿಗೆ ದುಬಾರಿಯಾಗುತ್ತಿವೆ ಎಂಬ