Widgets Magazine

ಬೆಸ್ಕಾಂ ಸಿಬ್ಬಂದಿಯ ಬೇಜವಾಬ್ದಾರಿ ಕೆಲಸಕ್ಕೆ ಬಲಿಯಾಯ್ತು 9 ವರ್ಷದ ಬಾಲಕನ ಪ್ರಾಣ

ಬೆಂಗಳೂರು| pavithra| Last Modified ಸೋಮವಾರ, 25 ಫೆಬ್ರವರಿ 2019 (12:14 IST)
ಬೆಂಗಳೂರು : ಎಲೆಕ್ಟ್ರಿಕಲ್ ವೈಯರ್ ತಗುಲಿ 9 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನ ಬಾಣಸವಾಡಿಯ ರಾಜ್‍ಕುಮಾರ್ ಪಾರ್ಕ್ ನಲ್ಲಿ ನಡೆದಿದೆ.


ಉದಯ್ ಕುಮಾರ್ (9) ಮೃತಪಟ್ಟ ಬಾಲಕ. ಭಾನುವಾರ ಪಾರ್ಕ್ ನಲ್ಲಿ ಲೈಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಬೆಸ್ಕಾಂ ಸಿಬ್ಬಂದಿ ಎಲೆಕ್ಟ್ರಿಕಲ್ ವೈಯರ್ ನ್ನು ಜಾಯಿಂಟ್ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಇದರ ಪರಿಣಾಮ ಭಾನುವಾರ ಸಂಜೆ ಸ್ನೇಹಿತರ ಜೊತೆ ಆಟವಾಡುವಾಗ ಉದಯ್ ಕುಮಾರ್ ಎಲೆಕ್ಟ್ರಿಕಲ್ ವೈರ್ ತಗುಲಿ ಮೃತಪಟ್ಟಿದ್ದಾನೆ.


ಈ ಬಗ್ಗೆ ಬಾಣಸವಾಡಿ ಪೊಲೀಸ್ ಟಾಣೆಯಲ್ಲಿ
ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :