ಮಾಜಿ ಸಚಿವ ಈಶ್ವರಪ್ಪ, ಮಾಜಿ ಸಚಿವ ರಮೇಶ್ ಜಾರಹೊಳಿ ಪರ ಸಚಿವ ಭೈರತಿ ಬಸವರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಅವರುಗಳಿಗೆ ಸಚಿವ ಸ್ಥಾನ ನೀಡುವಂತೆ ಖಂಡಿತ ಒತ್ತಾಯ ಮಾಡುತ್ತೇನೆ. ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು, ನನ್ನ ಜೊತೆಗೆ ಬಂದವರೊಂದಿಗೆ ಸೇರಿ ಒತ್ತಾಯ ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿದ್ರು. ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕಳಂಕ ರಹಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು