ಇಂಧನ ಸಚಿವ ನಾಲಾಯಕ್, ಅವ್ರಿಂದ ಕರ್ನಾಟಕಕ್ಕೆ ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ, ಮುಂದೆಯೂ ಆಗಲ್ಲ ಅಂತಾ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪರಮ ಭಕ್ತ, ವಿದ್ಯುತ್ ಗುತ್ತಿಗೆದಾರ ನಜರಬಾದ್ ನಿವಾಸಿ ಶ್ರೀಪಾಲ್ ಅಕ್ರೋಶ ಹೊರಹಾಕಿದ್ದಾರೆ. ಹಿಂದುತ್ವ ಏನು ಅಂತಾ ಗೊತ್ತಿದ್ಯಾ ಸುನೀಲ್ ಕುಮಾರ್ ಅವ್ರೇ ಎಂದು ಆಕ್ರೋಶ ಹೊರಹಾಕಿರೋ ಭಕ್ತ, ಶ್ರೀ ಕೃಷ್ಣನ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಳಕು ನೀಡಲು ಹಿಂದೇಟು ಹಾಕ್ತೀರೋ ಸಚಿವ ಸುನೀಲ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.