ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಸಂಘಟನೆಗಳು ಇಂದು ಹಾಗೂ ನಾಳೆ ಒಟ್ಟು ಎರಡು ದಿನಗಳ ಕಾಲ ಭಾರತ್ ಬಂದ್ ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರು ವಿವಿ, ರಾಣಿ ಚೆನ್ನಮ್ಮ ವಿವಿ, ಕರ್ನಾಟಕ ವಿವಿ, ಹಂಪಿ ಕನ್ನಡ ವಿವಿ, ಕುವೆಂಪು ವಿವಿ, ದಾವಣಗೆರೆ ವಿವಿ, ಗಂಗೂಬಾಯಿ ಹಾನಗಲ್ ವಿವಿ ಪರೀಕ್ಷೆಗಳು ಇಂದು ನಡೆಯಲ್ಲ ಎಂಬ ಮಾಹಿತಿ ಲಭ್ಯವಾಗಿದೆ.